ಹುಕ್ಕೇರಿ: ಇಂದು ರಾಜ್ಯಾದ್ಯಂತ 2024-25 ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಹುಕ್ಕೇರಿ ಪಟ್ಟಣದ ಪ್ರತಿಷ್ಠಿತ ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜು ಶೇ.89.50 ರಷ್ಟು ಫಲಿತಾಂಶ ವಾಗಿದ್ದು, ವಿಧ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಾದಿಯಾ ಅತ್ತಾರ 91% ಅಂಕ ಪಡೆದು ಕಾಲೇಜಿಗೆ ಪ್ರಥಮ, ವಾಣಿ ಅಲವಾಡೆ 90% ಅಂಕ ಪಡೆದು ದ್ವೀತಿಯ ಹಾಗೂ ಸಂಗೀತಾ ಜಾಗನೂರಿ 87% ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನೂ ವಾಣಿಜ್ಯ ವಿಭಾಗದಲ್ಲಿ ಫಾಯಲ್ 94% ಪ್ರಥಮ, ಭುವನೇಶ್ವರಿ ಪಾಟೀಲ 93% ದ್ವೀತಿಯ ಹಾಗೂ ಹಾಲಪ್ಪ ಕಂಟಿಕಾರ 92% ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ಕಲಾ ವಿಭಾಗದಲ್ಲಿ ಪ್ರತಿಕ್ಷಾ ಕೋಟಬಾಗಿ 86% ಪ್ರಥಮ, ಬಾಳವ್ವ ಹೆಗಡೆ 84.16% ದ್ವೀತಿಯ, ಸಂಜನಾ ಕೋರ್ತಿ 82.16% ತೃತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದ ಎಲ್ಲ ವಿದ್ಯಾರ್ಥಿಗಳಿಗೆ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಪ್ರಜ್ವಲ್ ನಿಲಜಗಿ ಹಾಗೂ ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಸಿಬ್ಬಂದಿಗಳು ವಿಧ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.