ಚಿಕ್ಕೋಡಿ: ನಿಪ್ಪಾಣಿ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ( 70 )ತಡರಾತ್ರಿ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಕಾಸಾಹೇಬ ಪಾಟೀಲರನ್ನ ಬೆಳಗಾವಿ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ವಿಧಾನ ಸಭಾ ಕ್ಷೇತ್ರದಿಂದ 1999 ರಿಂದ 2013 ರ ವರೆಗೆ ಸತತ ಮೂರು ಬಾರಿ ಕಾಕಾಸಾಹೇಬ ಪಾಟೀಲ ಶಾಸಕರಾಗಿದ್ದರು.
ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬೆಂಬಲಿಗರನ್ನ ಕಾಕಾಸಾಹೇಬ ಪಾಟೀಲ ಅಗಲಿದ್ದು, ನಿಪ್ಪಾಣಿಯಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದ್ದು ಹಲುವು ಗಣ್ಯರ ಭಾಗಿಯಾಗಲಿದ್ದಾರೆ.
