ಹುಕ್ಕೇರಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಸ್ಪರ್ಧಾ ಎಸ್.ಕೆ ಕೋಚಿಂಗ್ ಸೆಂಟರ್ ಪ್ರಥಮ ವರ್ಷದಲ್ಲೇ ಅದ್ಭುತ ಸಾಧನೆ ಮಾಡಿದ್ದು, ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ವಿಧ್ಯಾರ್ಥಿ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರ್ಯಾಂಕ್ ಪಡೆದಿದ್ದಾನೆ.
ಸಿ.ಆರ್. ಶೆಟ್ಟಿ ಫೌಂಡೇಶನ್’ದ ಸ್ಪರ್ಧಾ ಎಸ್.ಕೆ ಕೋಚಿಂಗ್ ಸೆಂಟರ್’ದಲ್ಲಿ ತರಬೇತಿ ಪಡೆದ ಹುಕ್ಕೇರಿ ಪಟ್ಟಣದ ಕುಮಾರ ಆರವ್ ಓಂಕಾರ್ ಹೆದ್ದೂರಶೆಟ್ಟಿ ವಿದ್ಯಾರ್ಥಿ ಸೈನಿಕ ಶಾಲಾ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ದೇಶಕ್ಕೆ 206 ನೇ ರ್ಯಾಂಕ್ ಪಡೆದು ಹುಕ್ಕೇರಿ ಪಟ್ಟಣದ ಕೀರ್ತಿಯನ್ನು ದೇಶಾದ್ಯಂತ ಪಸರಿಸಿದ್ದಾನೆ.

ಇನ್ನೂ ಇದೇ ತರಬೇತಿ ಕೇಂದ್ರದ 12 ವಿದ್ಯಾರ್ಥಿಗಳು 2025-26 ನೇ ಸಾಲಿಗೆ ಸೈನಿಕ ಶಾಲಾ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಮತ್ತು 5 ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದು, 3 ವಿದ್ಯಾರ್ಥಿಗಳು ರಾಷ್ಟ್ರೀಯ ಮಿಲಿಟರಿ(RMS) ಶಾಲೆಗೆ ಅರ್ಹತೆ ಪಡೆದಿದ್ದಾರೆ.
ಸ್ಪರ್ಧಾ ಎಸ್ ಕೆ ತರಬೇತಿ ಕೇದ್ರ ಪ್ರಾರಂಭವಾದ ಮೊದಲ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ನೀಡಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಎಲ್ಲ ವಿದ್ಯಾರ್ಥಿಗಳ ಅಮೋಘ ಸಾಧನಗೆ ಸಿ ಆರ್ ಶೆಟ್ಟಿ ಪೌಂಡೇಶನ್ ಅಧ್ಯಕ್ಷರಾದ ಚನ್ನಬಸವ (ಪಿಂಟು) ಶೆಟ್ಟಿ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ಶೆಟ್ಟಿ ಹಾಗೂ ನಿರ್ದೇಶಕ ಮಂಡಳಿಯ ಸರ್ವ ಸದಸ್ಯರು, ಎಸ್ ಕೆ ಕೋಚಿಂಗ್ ಸೆಂಟರ್ ಮುಖ್ಯಸ್ಥರಾದ ರಾಘವೇಂದ್ರ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಅವರ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದ್ದಾರೆ.