ಚಿಕ್ಕೋಡಿ: ನಿರಂತರ ಮಳೆಯಿಂದ ಒಡಲು ತುಂಬಿಕೊಂಡ ಕೃಷ್ಣಾ ನದಿಗೆ ಬಾಗೀನ ಅರ್ಪಿಸಲು ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದು ನದಿಯಲ್ಲಿ ಕಣ್ಮರೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಪಕ್ಕದ ಕೃಷ್ಣಾ ನದಿಯಲ್ಲಿ ನಡೆದಿದೆ.

ಕಾಲು ಜಾರಿ ಬಿದ್ದು ನದಿಯ ಪಾಲಾಗಿರುವ ಮಹಿಳೆಗಾಗಿ ಅಗ್ನಿ ಶಾಮಕ ದಳದಿಂದ ಹುಡುಕಾಟ ನಡೆಸಲಾಗುತ್ತಿದೆ. ಮಾಂಜರಿ ಗ್ರಾಮದ ಸಂಗೀತಾ ಶಿವಾಜಿ ಮಾಂಜರೇಕರ್ (40) ನೀರು ಪಾಲಾಗಿರುವ ಮಹಿಳೆ.


ಘಟನಾ ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ‌ಹಾಗೂ ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.