ಚಿಕ್ಕೋಡಿ: ಲಾಡ್ಜ್ ನಲ್ಲಿ ರೂಮ ನೀಡದ್ದಕ್ಕೆ ಚಿಕ್ಕೋಡಿ ಪಟ್ಟಣದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.

ಲಾಡ್ಜ್ ನಲ್ಲಿ ರೂಮ ನೀಡದ್ದಕ್ಕೆ ಕಿಡಿಗೇಡಿಗಳು ಕಂಡು ಕಂಡಲ್ಲಿ ಕಲ್ಲು ತೂರಿ ಬೈಕ್ ಹಾಗೂ ಕಾರಿನ ಗಾಜುಗಳ ಪುಡಿ ಪುಡಿ ಮಾಡಿದ್ದಾರೆ‌.
ಕೈಯಲ್ಲಿ ಲಾಂಗ್ ಮಚ್ಚು ಹಿಡಿದು ಕಂಡು ಕಂಡಲ್ಲಿ ವಾಹನಗಳ ಮೇಲೆ ಕಿಡಿಗೇಡಿಗಳ ಗ್ಯಾಂಗ ಕಲ್ಲು ತೂರಾಟ ನಡೆಸಿದೆ.


ಚಿಕ್ಕೋಡಿ ಪಟ್ಟಣದ ಬೃಂದಾವನ ಲಾಡ್ಜ್, ಕಾರ ಹಾಗೂ 5 ಕ್ಕೂ ಹೆಚ್ಚು ಬೈಕ ಮೇಲೆ ಕಲ್ಲು ತೂರಾಟ ನಡೆಸಿದ್ದು ಕಿಡಿಗೇಡಿಗಳ ಅಟ್ಟಹಾಸಕ್ಕೆ ಬೈಕ್ ಹಾಗೂ ಕಾರ ನುಜ್ಜು ಗುಜ್ಜಾಗಿದೆ. ನಿನ್ನೆ ತಡರಾತ್ರಿ ಚಿಕ್ಕೋಡಿಯ ಬೃಂದಾವನ ಲಾಡ್ಜ್ ನಲ್ಲಿ ಮೂವರು ಯುವಕರ ತಂಡ ರೂಮ್ ಕೇಳಲು ಬಂದಿದ್ದರು‌. ಕುಡಿದಿದ್ದ ಹಿನ್ನಲೆ ಲಾಡ್ಜ್ ನೀಡಲು ಮಾಲೀಕ ನಿರಾಕರಿಸಿದ್ದ‌. ಇದೆ ಸಿಟ್ಟಿನಲ್ಲಿ ಒಂದು ಗಂಟೆ ಬಳಿಕ ಬಂದು ಲಾಡ್ಜ್ ಮೇಲೆ ಹಾಗೂ ಅಲ್ಲೆ ಪಕ್ಕದಲ್ಲಿ ಇದ್ದ ಕಾರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲಿಂದ ಓತಾರಿ ಗಲ್ಲಿ, ಹೊಸಪೇಟ್ ಗಲ್ಲಿಯಲ್ಲಿ‌ನ ಬೈಕ್ ಗಳ ಮೇಲೆ ಕಲ್ಲೂ ತೂರಾಟ ನಡೆಸಿ ಕಲ್ಲು ತೂರಿ ಬೈಕ್ ಗಳನ್ನ ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿ ಮಹಾರಾಷ್ಟ್ರದ ಇಚಲಕರಂಜಿ ಮೂಲದ ಆರೋಪಿಗಳ ಬಂಧನಕ್ಕೆ ಚಿಕ್ಕೋಡಿ ಪೊಲೀಸರು ಬಲೆ ಬೀಸಿದ್ದಾರೆ.