ಹುಕ್ಕೇರಿ: ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ನಡೆದಿದೆ.

ಸಂತೋಷ ರವೀಂದ್ರ ಗುಂಡೆ (55) ಹಾಗೂ ಅಣ್ಣಾಸಾಹೇಬ ರವೀಂದ್ರ ಗುಂಡೆ (50) ಆತ್ಮಹತ್ಯೆ ಮಾಡಿಕೊಂಡ ಸಹೋದರರು. ಇಬ್ಬರು ಸಹೋದರರಿಗೆ ಮದುವೆ ಆಗಿರಲಿಲ್ಲ ಎನ್ನುವ ಕಾರಣದಿಂದ ಮದ್ಯದ ಅಮಲಿಗೆ ಬಲಿಯಾಗಿದ್ದರು.

ಮದ್ಯ ಸೇವನೆ ಬಳಿಕ ವಿಷಕಾರಿ ಪದಾರ್ಥ ಸೇವನೆ ಮಾಡಿ ಅಸ್ವಸ್ಥರಾಗಿದ್ದರು. ತಕ್ಷಣ ಇವರಿಬ್ಬರನ್ನು ನೆರೆಯ‌ ಮಹಾರಾಷ್ಟ್ರ ದ ಗಡಹಿಂಗ್ಲಜ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಈ ಕುರಿತು ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.