ಹುಕ್ಕೇರಿ: 2024-25 ನೇ ಸಾಲಿನ ಸಿ ಬಿ ಎಸ್ ಇ 10ನೇ ವರ್ಗದ ಬೋರ್ಡ್ ಪರೀಕ್ಷೆಯಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ವಿಧ್ಯಾರ್ಥಿನಿ ಸಿಂಚನಾ ಸಂತೋಷ ಚರಾಟಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗುವ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀ ಭರತೇಶ ವಿದ್ಯಾ ಸಂಸ್ಥೆಯ ಧನಪಾಲ ಪಿ ಕೆಮಲಾಪುರೆ ಸೆಂಟ್ರಲ್ ಸಿ ಬಿ ಎಸ್ ಇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಿಂಚನಾ ಸಿ ಬಿ ಎಸ್ ಇ 10 ನೇ ವರ್ಗದ ಬೋರ್ಡ್ ಪರೀಕ್ಷೆಯಲ್ಲಿ ಶೇ.90.2 ರಷ್ಟು ಅಂಕ ಪಡೆದು ಶಾಲೆಗೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಕಳೆದ ಐದು ವರ್ಷಗಳ ಫಲಿತಾಂಶದಲ್ಲೇ ಅತೀ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಸಿಂಚನಾ ಸಂತೋಷ ಚರಾಟಿ ಪಾತ್ರರಾಗಿದ್ದಾರೆ.
ವಿದ್ಯಾರ್ಥಿನಿ ಅತ್ಯುನ್ನತ ಸಾಧನೆಗೆ ಮಾಜಿ ಜಿಪಂ ಸದಸ್ಯ ಪವನ ಕತ್ತಿ, ವಿನೋದ ರಾಮದುರ್ಗ, ಸತೀಶ್ ಚರಾಟಿ, ವಿನಾಯಕ ಶೆಟ್ಟಿ, ಚೇತನ ಕತ್ತಿ ಸತೀಶ ಜಾಗನೂರ ಅವರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
