ನಿಪ್ಪಾಣಿ: ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸುದ ಪರಿಣಾಮ ಅಂಗನವಾಡಿ ಶಿಕ್ಷಕಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ಗ್ರಾಮದ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಅಂಜನಾ ಗೋಪಾಲ ಮಾಳಿ (55) ಎಂದು ಗುರುತಿಸಲಾಗಿದೆ. ಮೃತ ಅಂಜನಾ ಮಾಳಿ ಪತಿ ಜೊತೆಗೆ ದ್ವಿಚಕ್ರ ವಾಹನದ ಮೇಲೆ ಹೋಗುತ್ತಿರುವಾಗ ಬೈಕ್ ಮತ್ತು ಕಾರು ಮಧ್ಯೆ ಅಪಘಾವಾಗಿದ್ದು, ಬೈಕ್ ಹಿಂಬದಿ ಕುಳಿತಿದ್ದ ಅಂಜನಾ ತಲೆಗೆ ಗಂಭೀರ ಗಾಯವಾಗಿತ್ತು.

ಬಳಿಕ ಅವರನ್ನ ತಕ್ಷಣ ನಿಪ್ಪಾಣಿಯ ಮಹಾತ್ಮಗಾಂಧಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಸಂಧರ್ಭ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
