ನಿಪ್ಪಾಣಿ: ಟೋಲ್ ದಾಟುವ ವೇಳೆ ಲಾರಿಯಲ್ಲಿದ್ದ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಎರಡು ಟೋಲ್ ಕೆಲೆಕ್ಷನ್ ಸೆಂಟರ್ ಹಾಗೂ ಲಾರಿ ಸುಟ್ಟು ಭಸ್ಮವಾದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಟೋಲ್ ಪ್ಲಾಜಾದಲ್ಲಿ ನಡೆದಿದೆ.

ನಿಪ್ಪಾಣಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿಯಿಂದ ಕೊಲ್ಹಾಪುರಕ್ಕೆ ತೆರಳುತ್ತಿದ್ದ ಲಾರಿ ಟೋಲ್ ದಲ್ಲಿ ಡಿವೈಡರ್ ಗೆ ಹಿಂಬದಿಯಿಂದ ಟಚ್ ಆಗಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಗ್ನಿ ಅವಘಡ ಸಂಭವಿಸದೆ.
ಲಾರಿಯ ಡಿಸೇಲ್ ಟ್ಯಾಂಕ್ ಬಳಿಯೇ ಬ್ಯಾಟರಿ ಇದ್ದ ಕಾರಣ ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದಂತೆ ಟೋಲ್ ಗೆ ಬೆಂಕಿ ಆವರಿಸಿ ಲಾರಿ ಹಾಗೂ ಎರಡು ಟೋಲ್ ಕೆಲೆಕ್ಷನ್ ಸೆಂಟರ್ ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಬೆಂಕಿ ಆವರಿಸುತ್ತಿದ್ದಂತೆ ಟೋಲ್ ದಲ್ಲಿ ಇದ್ದವರು ಹೊರಗೆ ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ.
ಘಟನಾ ಸ್ಥಳಕ್ಕೆ ನಿಪ್ಪಾಣಿ ಅಗ್ನಿಶಾಮಕ ದಳದ ಸಿಬ್ಬಂಧಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
