ಹುಕ್ಕೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್’ದಿಂದ ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಗೃಹವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಬಾಗವಾನ್ ಗಲ್ಲಿಯಲ್ಲಿ ನಡೆದಿದೆ.

ಬಾಗವಾನ ಗಲ್ಲಿಯ ಮೀರಾಸಾಬ್ ಬಾಗವಾನ ಎಂಬುವವರ ಮನೆ ಸುಟ್ಟು ಭಸ್ಮವಾಗಿದೆ. ಎರಡನೇ ಮಹಡಿಯಲ್ಲಿದ್ದ ತಗಡಿನ ಪತ್ರಾಸ್ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿ ಉರಿದ ಪರಿಣಾಮ ಮನೆಯಲ್ಲಿದ್ದ ದಿನಸಿ, ಟಿವಿ, ಸೇರಿದಂತೆ ಸುಮಾರು 1.5 ಲಕ್ಷ ರೂ ಗೃಹ ಉಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆ ಮಾಲೀಕರರು ಇಲೆಕ್ಟ್ರಿಕ್ ಕೆಲಸ ಮಾಡುತ್ತಾರೆ ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದಿರುವ ಕಾರಣ ಬಾರಿ ಅನಾಹುತ ತಪ್ಪಿದೆ. ಇನ್ನೂ ಸ್ಥಳಿಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.