ಚಿಕ್ಕೋಡಿ : ಲಾಂಗ್ ತೋರಿಸಿ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.
ಜಮೀನು ವಿವಾದದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಪ್ರಕಾಶ ಗೋಕಾಕ್, ಹಾಗೂ ಪಾರ್ವತಿ ಗೋಕಾಕ್ ಎಂಬುವವರ ಮಧ್ಯೆ ಗಲಾಟೆ ನಡೆದಿದ್ದು ಇಬ್ಬರೂ ಲಾಂಗ್ ಹಿಡಿದು ಪರಸ್ಪರ ಹಲ್ಲೆಗೆ ಯ್ನತಿಸಿದ್ದಾರೆ.

ಎರಡೂ ಗುಂಪಗಳನ್ನು ಚದುರಿಸಿ ಪೋಲಿಸರು ಠಾಣೆಗೆ ಕರೆದೊಯ್ದಿದ್ದಾರೆ. ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದು ಹಾರೂಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
