ಬೆಳಗಾವಿ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸಿ 2 ಲಕ್ಷ ರೂ. ನಗದು ಸೇರಿದಂತೆ ಮೊಬೈಲ್ ಗಳನ್ನ ವಶಪಡಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಈ ಕ್ರಿಕೆಟ್ ಬೆಟ್ಟಿಂಗ್ ಆಟದಲ್ಲಿ ತೊಡಗಿದ್ದ ಬೆಳಗಾವಿಯ ಸಿಂಧಿ ಕಾಲೋನಿಯ ಉದ್ದವ್ ಎಂಬುವನನ್ನ ಬಂಧಿಸಲಾಗಿದೆ.

ಬೆಳಗಾವಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿ.ಇ.ಎನ್ ಪೊಲೀಸ್ ಠಾಣೆಯ ಪಿಐ ಬಿ.ಆರ್.ಗಡೇಕರ್ ನೇತೃತ್ವದಲ್ಲಿ ಸಿಇಎನ್ ಹಾಗೂ ಕ್ಯಾಂಪ್‌ ಪೊಲೀಸರು ನಗರದ ಸಿಂಧಿ ಕಾಲನಿಯಲ್ಲಿರುವ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇನ್ನೋರ್ವ ಬುಕ್ಕಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಜಾಲ ಬಿಸಿದ್ದಾರೆ. ಈ ದಾಳಿಯ ವೇಳೆ 12 ಐಫೋನ್, 13 ಬೇಸಿಕ್ ಹ್ಯಾಂಡ್ ಸೆಟ್, ಸ್ಮಾರ್ಟ್ ಟಿವಿ 2 ಲಕ್ಷ ರೂ. ನಗದು ಹಣವನ್ನ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.