ಅಥಣಿ : ಅಪ್ರಾಪ್ತೆಯ ಮೇಲೆ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಸೇರಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಮಹಾಂತೇಶ ಹಿಪ್ಪರಗಿ ಎಂಬಾತ ಪೊಲೀಸರ ಅತಿಥಿಯಾಗಿದ್ದಾನೆ‌.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಭೂಪ. ಕೂಡಲೇ ಪೋಷಕರಿಕೆ ಅಪ್ರಾಪ್ತ ಬಾಲಿಕ ಮಾಹಿತಿ ತಿಳಿಸಿದ್ದಾಳೆ. ಬಳಿಕ ಐಗಳಿ ಪೊಲೀಸ್‌ರಿಗೆ ಅಪ್ರಾಪ್ತೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡ ಐಗಳಿ ಪೊಲೀಸರು ಕಾಮುಕ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಐಗಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.