ಚಿಕ್ಕೋಡಿ: ಕೈಯಲ್ಲಿ ಲಾಂಗ್ ಹಿಡಿದು ರಿಲ್ಸ್ ಹುಚ್ಚಾಟ ಮೆರೆದ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.
ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಹಾಗೂ ಸಸಾಲಟ್ಟಿ ಗ್ರಾಮದ ಯುವಕರ ಗ್ಯಾಂಗ್ ಅಂದರ್ ಆಗಿದೆ.

ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡುವ ಹುಚ್ಚಾಟ ಮಾಡಿದ್ದ
ಮುಗಳಖೋಡ ಗ್ರಾಮದ ಬಸವರಾಜ ಯಡವನ್ನವರ, ಲೋಹಿತ್ ಚೌಡಕ್ಕಿ, ಚೇತನ್ ಕರಿಭೀಮಗೋಳ, ಪರಶುರಾಮ್ ಕಾಕೊಂಡಗೋಳ ಹಾಗೂ ಸಸಾಲಟ್ಟಿ ಗ್ರಾಮದ ಸಿದ್ರಾಮ ಹುಕ್ಕೇರಿ ಸೇರಿ ಐವರನ್ನ ಪೊಲೀಸರು ಬಂಧಿಸಿದ್ದಾರೆ.


ಕೆಲವು ತಿಂಗಳ ಹಿಂದೆ ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಿದ್ದ ಯುವಕರ ಗ್ಯಾಂಗ್ ಕುಂಭಮೇಳದಿಂದ ಮರಳಿ ಬರುವಾಗ ಮಾರಕಾಸ್ತ್ರಗಳ ಖರೀದಿ ಮಾಡಿತ್ತು. ಲಾಂಗ್ ಹಿಡಿದು ಪೋಸ್ ಕೊಟ್ಟ ಪೋಟೋಸ್ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ್ದರು. ರೀಲ್ಸ್ ಹುಚ್ಚಾಟದಿಂದ ಯುವಕರನ್ನ ಪೊಲೀಸರು ಬಂಧಿಸಿದ್ದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
