ಬಾಗಲಕೋಟೆ : ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಪ್ರವೀಣ ಕುರಣೆ ಹೃದಯಾಘಾತದಿಂದ ಸಾವನ್ನಪ್ಪಿದವರು.ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿರುವ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ವರ ಪ್ರವೀಣ್ ಕುರಣೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದು,  ಮದುವೆ ಮಂಟಪದಲ್ಲಿ ಘೋರ ದುರಂತ ನಡೆದಿದೆ.

ಇಂದು ಪ್ರವೀಣ್ ಕುರಣೆ ಹಾಗೂ ಪೂಜಾ ವಿವಾಹ ಸಮಾರಂಭ ನಡೆದಿತ್ತು. ತಾಳಿ ಕಟ್ಟಿದ ತಕ್ಷಣ ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಹೃದಯಘಾತದಿಂದ ವರ ಸಾವನ್ನಪ್ಪಿದ್ದಾರೆ.
ಪ್ರವೀಣ್ ಕುರಣೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ನಿವಾಸಿ ಎನ್ನಲಾಗಿದ್ದು ಮದುವೆ ಸಂಭ್ರಮದಲ್ಲಿದ್ದ ಪ್ರವೀಣ್ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.