ಸತಾರಾ: ಸರಿಯಾದ ರಸ್ತೆ ಇಲ್ಲದ್ದಕ್ಕೆ ಹೆಗಲ ಮೇಲೆ ಯುವಕನೊಬ್ಬ ಬೈಕ್ ಹೊತ್ತು ಬಂದ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ.‌ ಹೆಗಲ ಮೇಲೆ ಬೈಕ್ ಹೊತ್ತ ಯುವಕನ ವಿಡಿಯೋ ವೈರಲ್ ಆಗಿದೆ.

ಮಹಾರಾಷ್ಟ್ರದಾದ್ಯಂತ ಭಾರಿ ಮಳೆ ಹಿನ್ನೆಲೆ ಹಲವು ಅವಾಂತರ ಸೃಷ್ಟಿಯಾಗಿವೆ. ರಸ್ತಯೆಲ್ಲ ಕೊಚ್ಚೆಮಯವಾಗಿದ್ದರಿಂದ ಹೆಗಲ ಮೇಲೆ ಯುವಕ ಬೈಕ್ ಹೊತ್ತು ಬಂದಿದ್ದಾನೆ. ಹೊಂಡಾ ಬೈಕ್ ಹೆಗಲ ಮೇಲೆ ಹೊತ್ತುಕೊಂಡು ಬಂದ ಯುವಕನ ವಿಡಿಯೋ ಸಾಮಾಜಾಕಿ ಜಾಲತಾಣಳಲ್ಲಿ ವೈರಲ್ ಆಗುತ್ತಿದೆ. ರಸ್ತೆ ಮಾಡದ ಸರಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ