ವಿಜಯಪುರ: ಇಂದು ಮಧ್ಯಾಹ್ನ ವಿಜಯಪುರ ನಗರದ ಕೆಲ ಭಾಗ ಸೇರಿದಂತೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದ್ದು ಭಾರಿ ಶಬ್ದ ಕೇಳಿಬಂದಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಹಲವೆಡೆ ಭೂಕಂಪನದ ಅನುಭವ ಜೋತೆಗೆ ನಿಗೂಢ ಶಬ್ದಕ್ಕೆ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ.
ವಿಜಯಪುರದ ಕೆ.ಹೆಚ್.ಬಿ ಕಾಲೋನಿ, ಬ್ಯಾಂಕರ್ಸ್ ಕಾಲೋನಿ, ಸದಾಶಿವನಗರ, ಆಕೃತಿ ಕಾಲೋನಿ ಜನರಿಗೂ ಭಯಂಕರವಾದ ಶಬ್ದ ಕೇಳಿದೆ. ಭೂಕಂಪನದ ಅನುಭವ ಕೂಡ ಆಗಿದ್ದು, ಭೂಮಿಯಾಳದ ನಿಗೂಢ ಸದ್ದಿನ ಬಗ್ಗೆ ಇನ್ನಷ್ಟೇ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.