ಬೆಳಗಾವಿ: ಪರಸ್ಪರ ಪ್ರೀತಿ ಮಾಡುತ್ತಿದ್ದ ಪ್ರೇಮಿಯೋರ್ವ ಅಪ್ರಾಪ್ತ ಬಾಲಕಿಗೆ ಮದ್ಯ ಸೇವನೆ ಮಾಡಿಸಿ ಅತ್ಯಾಚಾರ ಮಾಡಿದ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿಯ ಔರಂಗಜೇಬ್ (23) ಅತ್ಯಾಚಾರ ಮಾಡಿದ ಯುವಕ. ಈತ ಮತ್ತು 16 ವರ್ಷದ ಅಪ್ರಾಪ್ತೆ ಕಳೆದ ಮೂರು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಕುಡಿದ ನಶೆಯಲ್ಲಿ ಪದೇ ಪದೇ ಅಪ್ರಾಪ್ತ ಬಾಲಕಿಯ ಮನೆಗೆ ಹೋಗಿ ಮದುವೆ ಮಾಡಿಸಿ ಎಂದು ಪೋಷಕರನ್ನ ಪೀಡಿಸುತ್ತಿದ್ದ. ಕೊನೆಗೆ ಕಳೆದ ನಾಲ್ಕದು ದಿನದ ಹಿಂದೆ ತನ್ನ ಗೆಳೆಯನ ಸಹಾಯದಿಂದ ಅಪ್ರಾಪ್ತ ಬಾಲಕಿ ಮನೆಗೆ ಹೋಗಿ ಮದ್ಯ ಸೇವನೆ ಮಾಡಿಸಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.

ಔರಂಗಜೇಬನಿಗೆ ಸಹಾಯ ಮಾಡಿದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು ಪರಾರಿಯಾಗಿರುವ ಔರಂಗಜೇಬನಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದೆ.