ಬೆಳಗಾವಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯ ವಿಚಿತ್ರ ಬೇಡಿಕೆ ಪೋಟೊಗಳು ವೈರಲ್ ಆಗಿವೆ. ಅವಳು ನನ್ನ ಲವ್‌ ಮಾಡಬೇಕಾದರೆ ನೀವು ಪ್ಲೀಸ್ ನನ್ನ ಪಾಸ್‌ ಮಾಡಬೇಕು ಮೇಡಂ, ದಯವಿಟ್ಟು ಪಾಸ್ ಮಾಡಿ ಎಂದು ಬೇಡಿಕೊಂಡೊರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯ ಈ ಬರವಣಿಗೆಗೆ ಶಿಕ್ಷಕರು ಸಹ ದಂಗಾಗಿದ್ದಾರೆ.

ಫೀಸ್ ನನ್ನ ಪಾಸ್ ಮಾಡಿ, ನನ್ನ ಲವ್ ನಿಮ್ಮ ಕೈಯಲ್ಲಿದೆ. ಪ್ಲೀಸ್ … ಪ್ಲೀಸ್ …ನನ್ನ ಪಾಸ್ ಮಾಡಿ ಮೇಡಂ ಎಂದು ವಿದ್ಯಾರ್ಥಿ ವಿಚಿತ್ರವಾಗಿ ಬೇಡಿಕೊಂಡಿದ್ದಾರೆ. ನಾನ್ ಪಾಸ್ ಆದರೆ, ಮಾತ್ರ ಅವಳು ನನ್ನ ಲವ್ ಮಾಡುತ್ತಾಳೆ. ಪಾಸ್ ಮಾಡಿ ನನ್ನ ಲವ್ ಉಳಿಸಿ ಎಂದು ವಿಧ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೌಲ್ಯಮಾಪನ ಮಾಡುವ ವೇಳೆ ಈತನ ಮನವಿಗೆ ಶಿಕ್ಷಕರು ಕೂಡ ಶಾಕ್ ಆಗಿದ್ದಾರೆ.

ಇನ್ನೂ ವಿದ್ಯಾರ್ಥಿಯ ಮತ್ತೊಂದು ವಿಚಿತ್ರ ಮನವಿ ಮಾಡಿಕೊಂಡಿದ್ದಾರೆ. ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟು ದಯವಿಟ್ಟು ನನ್ನ ಪಾಸ್ ಮಾಡಿ, ನನ್ನ ಜೀವನ ಉಳಿಸಿ, ಬಹಳಷ್ಟು ಕನಸು ಕಂಡಿದ್ದೆನೆ. ಪಾಸ್ ಆಗಿಲ್ಲ ಅಂದರೆ ತಂದೆ-ತಾಯಿಯು ಕಾಲೇಜ್ ಕಳಿಸಲ್ ನಿಮಗೆ ಬೇಕಾದರೆ ಇನ್ನಷ್ಟು ದುಡ್ಡ ಕೊಡತ್ತಿನಿ ಎಂದು ಮನವಿ ಮಾಡಿಕೊಂಡಿರುವ ವಿಚಿತ್ರ ಪತ್ರ ವೈರಲ್ ಆಗಿದೆ.