ಹುಕ್ಕೇರಿ: ಶ್ರೀ ಮಹಾವೀರ ಮಲ್ಟಿ ಪರ್ಪಸ್ ಸೌಹಾರ್ದ ಸಹಕಾರಿ ಸಂಘ 3 ಕೋಟಿ 55 ಲಕ್ಷ 5 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದರು.
ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 300 ಸದಸ್ಯರಿಂದ ಆರಂಭವಾದ ಬ್ಯಾಂಕ ಇಂದು 15151 ಸದಸ್ಯರನ್ನ ಹೊಂದಿದೆ. ಶೇರ್ ಬಂಡವಾಳ 42 ಲಕ್ಷ 78 ಸಾವಿರ ಹೊಂದಿದೆ. ಸಹಕಾರಿ ನಿಧಿ 10 ಕೋಟಿ 6 ಲಕ್ಷ 98 ಸಾವಿರ ಹಾಗೂ ಸಹಕಾರಿ ಠೇವುಗಳು 280 ಕೋಟಿ 54 ಲಕ್ಷ 37 ಸಾವಿರ ರೂ ಆಗಿದೆ. ಬ್ಯಾಂಕ್ 38 ಕೋಟಿ 20 ಲಕ್ಷ 87 ಸಾವಿರ ಹೂಡಿಕೆ ಹೊಂದಿದೆ.
ಬ್ಯಾಂಕಿನ ದುಡಿಯುವ ಬಂಡವಾಳ 315 ಕೋಟಿ 29 ಲಕ್ಷ 67 ಸಾವಿರ ಇದೆ. ಸಹಕಾರಿಯ ಒಟ್ಟು ವಾರ್ಷಿಕ ವಹಿವಾಟು 1183 ಕೋಟಿ 84 ಲಕ್ಷ 16 ಸಾವಿರ ಇದ್ದು 16 ಶಾಖೆಗಳ ಮೂಲಕ ವಹಿವಾಟು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ 25 ವರ್ಷಗಳಿಂದ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ.ಜೊತೆಗೆ ಲಾಭವನ್ನ ಮೂಲ ಉದ್ಧೇಶವಾಗಿಸದೇ ಸಣ್ಣ ವ್ಯಾಪಾರಸ್ಥರು ಸಹಾಯ ಕಲ್ಪಿಸಿದೆ. ಸಿಬ್ಬಂದಿಗಳು, ಶೇರುದಾರರು ಆಡಳಿತ ಮಂಡಳಿ ಸೇರಿ ಎಲ್ಲರ ಸಹಕಾರದಿಂದ ಬ್ಯಾಂಕ್ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.
ಸಹಕಾರಿ ಈಗಾಗಲೇ 7 ಸ್ವಂತ ಕಟ್ಟಡಗಳನ್ನ ಬ್ಯಾಂಕ್ ಹೊಂದಿದ್ದಯ ನೂತನವಾಗಿ ಶಿರಗುಪ್ಪಿಯಲ್ಲಿ ಬ್ಯಾಂಕ ಕಟ್ಟಡ ಆರಂಭವಾಗಿದೆ.
ಬೆಳಗಾವಿಯ ಪಾರಿಶವಾಡದಲ್ಲಿ ಖಾಲಿ ನಿವೇಶನ ಹೊಂದಲಾಗಿದೆ.
ಶೀಘ್ರದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಾಗೂ ಹುಬ್ಬಳ್ಳಿಯಲ್ಲಿ 2 ಶಾಖೆ ಆರಂಭಿಸಲಾಗುವದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಸಂಜೀವ ನಿಲಜಗಿ, ಕಿರಣ ಸೊಲ್ಲಾಪೂರೆ, ವ್ಯವಸ್ಥಾಪಕ ರಾಜೇಂದ್ರ ಪಾಟೀಲ ,ಸಂತೋಷ ರಜಪೂತ, ಅಶೋಕ ಪಾಟೀಲ ಉಪಸ್ಥಿತರಿದ್ದರು.